ವಿಷುವದ್ರೇಖೆಯ ಗಿನಿ, ಅಧಿಕೃತವಾಗಿ ವಿಷುವದ್ರೇಖೆಯ ಗಿನಿ ಗಣರಾಜ್ಯ, ಮಧ್ಯ ಆಫ್ರಿಕಾದ ಒಂದು ದೇಶ. ಆಫ್ರಿಕಾ ಖಂಡದ ಅತಿ ಚಿಕ್ಕ ದೇಶಗಳಲ್ಲಿ ಒಂದಾದ ಇದರ ಉತ್ತರಕ್ಕೆ ಕ್ಯಾಮೆರೂನ್, ದಕ್ಷಿಣ ಮತ್ತು ಪೂರ್ವಕ್ಕೆ ಗ್ಯಾಬೊನ್, ಮತ್ತು ಪಶ್ಚಿಮಕ್ಕೆ ಗಿನಿ ಕೊಲ್ಲಿ ಇವೆ. ಮುಂಚೆ ಸ್ಪೇನ್ನ ವಸಾಹತು ಆಗಿದ್ದ ಈ ದೇಶ ವಿಷುವದ್ರೇಖೆಯ ಮತ್ತು ಗಿನಿ ಕೊಲ್ಲಿಯ ಸಾಮೀಪತೆಯಿಂದ ತನ್ನ ಹೆಸರನ್ನು ಪಡೆದಿದೆ. ಆಫ್ರಿಕಾದಲ್ಲಿ ಸ್ಪ್ಯಾನಿಷ್ ಭಾಷೆ ಅಧಿಕೃತವಾಗಿರುವ ಏಕೈಕ ದೇಶ ಇದು.